ಕೊರೋನಾ ವೈರಸ್ ವಿರುದ್ಧ ಹೋರಾಡಲು ಎಲಾ ರಾಷ್ಟ್ರಗಳು ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಡಿದ್ದು ಅಮೇರಿಕಾ ಕೂಡ ಇದಕ್ಕೆ ಹೊರತಾಗದೇ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದೆ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಟ್ರಂಪ್ ಭಾರತದ ಬಗ್ಗೆ ಹೇಳಿಕೆ ಒಂದು ರೀತಿಯಲ್ಲಿ ಪ್ರಶಂಸೆಯಂತೆ ಕಂಡರೂ ಅಲ್ಲೊಂದು ಪ್ರತೀಕಾರದ ಎಚ್ಚರಿಕೆಯೂ ಇತ್ತು. ಅದೇನೆಂದರೆ
ಅಮೆರಿಕದಲ್ಲಿ ಕರೊನಾ ವೈರಸ್ ಸೋಂಕು ತಡೆಗೆ ಇನ್ನಿಲ್ಲದ ಕಸರತ್ತು ನಡೆಯುತ್ತಿದೆ. ಔಷಧ ಅಭಿವೃದ್ಧಿ ಪಡಿಸುವ ಪ್ರಯತ್ನವೂ ನಡೆಯುತ್ತಿದೆ. ಇವುಗಳ ನಡುವೆ, ಮಲೇರಿಯಾ ತಡೆಗೆ ಬಳಸುವ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧ ಈ ಸೋಂಕಿಗೆ ಪರಿಹಾರ ಒದಗಿಸುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಸಂಶೋಧನೆಯೊಂದನ್ನು ಉಲ್ಲೇಖಿಸಿ ಹೇಳಿಕೊಂಡಿದ್ದರು.
ಈ ಎಲ್ಲ ಬೆಳವಣಿಗೆಯ ನಡುವೆಯೇ, ಭಾರತ ಈ ಹೈಡ್ರೋಕ್ಸಿಕ್ಲೋರೋಕ್ವಿನ್ ರಫ್ತು ಮಾಡುವುದನ್ನು ನಿಷೇಧಿಸಿತ್ತು. ಆರಂಭದಲ್ಲಿ ಇದರ ಪರಿಣಾಮ ಯಾರಿಗೂ ಗೊತ್ತಾಗಿರಲಿಲ್ಲ. ಕೆಲವು ದಿನಗಳ ಹಿಂದೆ ಭಾರತ ತೆಗೆದುಕೊಂಡ ಕ್ರಮ ಈಗ ಅಮೆರಿಕಕ್ಕೆ ಸಂಕಟವನ್ನು ತಂದೊಡ್ಡಿದೆ. ಅದರ ಪರಿಣಾಮವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇಂದಿನ ತಣ್ಣನೆಯ ಎಚ್ಚರಿಕೆ! ಆ ಎಚ್ಚರಿಕೆ ಹೀಗಿತ್ತು ನೋಡಿ..
ನಾನು ಅವರ (ಪಿಎಂ ಮೋದಿ) ಜತೆ ಭಾನುವಾರ ಬೆಳಗ್ಗೆ ಮಾತನಾಡಿದೆ. ಅದೇ ರೀತಿ ನಮ್ಮ ಬೇಡಿಕೆಯ ಪೂರೈಕೆಯನ್ನು (ಹೈಡ್ರೋಕ್ಸಿಕ್ಲೋರೋಕ್ವಿನ್)ಯನ್ನು ನೀವು ಒದಗಿಸಿದರೆ ನಾವು ಅದನ್ನು ಮೆಚ್ಚುತ್ತೇವೆ. ಒಂದೊಮ್ಮೆ ಅವರು ಅದನ್ನು ಕಳುಹಿಸಲು ನಿರಾಕರಿಸಿದರೆ ಪರವಾಗಿಲ್ಲ. ಆದರೆ, ಸಹಜವಾಗಿಯೇ ಪ್ರತೀಕಾರವೂ ಇರಬಹುದು. ಯಾಕೆ ಇರಬಾರದು ಎಂದು ಪ್ರಧಾನಿ ಮೋದಿಯವರಿಗೆ ಸವಾಲನ್ನು ಎಸೆದಿದ್ದಾರೆ ಟ್ರಂಪ್.
ಅಮೆರಿಕದಲ್ಲಿ ಇದುವರೆಗೆ 10,871 ಜನ ಕರೋನಾಕ್ಕೆ ಬಲಿಯಾಗಿದ್ದು, 2,66,994 ಜನ ಸೋಂಕು ಪೀಡಿತರಾಗಿದ್ದಾರೆ. ಅಲ್ಲಿನ ಮೃಗಾಲಯದಲ್ಲೂ ಹುಲಿ ಮತ್ತು ಇತರೆ ಪ್ರಾಣಿಗೆ ಸೋಂಕು ತಗುಲಿರುವುದು ಕೂಡ ವರದಿ ಯಾಗಿದೆ.
ಯಾವಾಗ ಆಯ್ತು ರಫ್ತು ನಿಷೇಧ?: ಭಾರತದ ಡೈರೆಕ್ಟರೇಟ್ ಆಫ್ ಫಾರಿನ್ ಟ್ರೇಡ್ ಮಾರ್ಚ್ ೨೫ರಂದು ಹೈಡ್ರೋಕ್ಸಿಕ್ಲೋರೋಕ್ವಿನ್ ನೇರ ರಫ್ತನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದಾಗ್ಯೂ, ಪ್ರತಿಯೊಂದು ರಫ್ತು ಪ್ರಕರಣವನ್ನು ಮಾನವೀಯತೆ ನೆಲೆಯಲ್ಲಿ ಪರಿಶೀಲಿಸಿ ರಫ್ತಿಗೆ ಅನುವು ಮಾಡಿಕೊಡುವುದಾಗಿ ಸ್ಪಷ್ಟಪಡಿಸಿತ್ತು. ಹೆಚ್ಚುವರಿಯಾಗಿ, ಮುಂಗಡವಾಗಿ ಹಣ ಪಾವತಿಸಿದ್ದರೆ ಅಥವಾ ಮುಂಗಡವಾಗಿ ವಾಪಸು ಪಡೆಯಲಾಗದ ಲೆಟರ್ ಆಫ್ ಕ್ರೆಡಿಟ್ ನೀಡಿದ್ದರೆ ಅಂಥ ಶಿಪ್ಮೆಂಟನ್ನು ರಫ್ತು ಮಾಡಲು ಅನುವು ಮಾಡಿಕೊಡಲಾಗುವುದು ಎಂದೂ ಹೇಳಿತ್ತು.
ಮಲೇರಿಯಾ ತಡೆ ಔಷಧ ರಫ್ತನ್ನು ವಿಶೇಷ ಆರ್ಥಿಕ ವಲಯಕ್ಕೂ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ. ಕೋವಿಡ್-19 ಸಂಕಷ್ಟದ ಈ ಸಂದರ್ಭದಲ್ಲಿ ಭಾರತದಲ್ಲಿ ಔಷಧಕ್ಕೆ ಕೊರತೆ ಆಗಬಾರದು ಎಂಬ ಮುಂಜಾಗ್ರತಾ ಕ್ರಮವಾಗಿ ಈ ಆದೇಶವನ್ನು ಭಾರತ ಸರ್ಕಾರ ಹೊರಡಿಸಿತ್ತು.
]]>