ಕೊರೊನಾ ಸೋಂಕಿತರ ಕ್ವಾರಂಟೈನ್ ಮತ್ತು ಐಸೋಲೇಷನ್ಗಾಗಿ ನೈಋತ್ಯ ರೈಲ್ವೆ 270 ಕೋಚ್ಗಳನ್ನು ವಾರ್ಡ್ಗಳಾಗಿ ಪರಿವರ್ತನೆ ಮಾಡಿದೆ. ವಿವಿಧ ವೈದ್ಯಕೀಯ ಉಪಕರಣಗಳನ್ನು ಇಡಲು ವ್ಯವಸ್ಥೆ ಮಾಡಿದ್ದು, ನಿರಂತರ ವಿದ್ಯುತ್ ಪೂರೈಕೆಗೂ ಕ್ರಮ ಕೈಗೊಳ್ಳಲಾಗಿದೆ.
ಭಾರತೀಯ ರೈಲ್ವೆಯ ನಿರ್ದೇಶನದಂತೆ, ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ ವಾರ್ಡ್ಗಳನ್ನು ತಯಾರು ಮಾಡಲಾಗಿದೆ. ರೋಗಿಗಳು ಕ್ವಾರಂಟೈನ್, ಐಸೋಲೆಷನ್ನಲ್ಲಿ ಇರಲು ಈ ವಾರ್ಡ್ಗಳು ಸಿದ್ಧವಾಗಿದೆ ಎಂದು ನೈಋತ್ಯ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆಯಾಗಿದೆ. ಮಾರ್ಚ್ 25 ರಿಂದ ಎಲ್ಲಾ ಪ್ರಯಾಣಿಕ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಸ್ಲೀಪರ್ ಕೋಚ್ ರೈಲುಗಳನ್ನು ವಾರ್ಡ್ಗಳಾಗಿ ಪರಿವರ್ತನೆ ಮಾಡಲಾಗಿದೆ. ಸೋಂಕಿತರು ಅಲ್ಲಿ ಇರಲು ಅಗತ್ಯ ವ್ಯವಸ್ಥೆಗಳನ್ನು ಒದಗಿಸಲಾಗಿದೆ.
ಪ್ರತಿ ಕೋಚ್ನಲ್ಲಿ 8 ವಾರ್ಡ್ಗಳಿವೆ. ಈ ಕೋಚ್ಗಳು ಸ್ವಚ್ಛವಾಗಿದ್ದು, ಸ್ಯಾನಿಟೈಸ್ ಮಾಡಲಾಗಿದೆ. ಸೋಂಕಿತರು ವಾರ್ಡ್ನಲ್ಲಿ ಕ್ವಾರಂಟೈನ್, ಐಸೋಲೇಷನ್ ವಾರ್ಡ್ನಲ್ಲಿ ಸುರಕ್ಷಿತವಾಗಿ ಇರಬಹುದು ಎಂದು ನೈಋತ್ಯ ರೈಲ್ವೆ ವಲಯದ ಪ್ರಕಟಣೆ ಹೇಳಿದೆ.
ಭಾರತೀಯ ರೈಲ್ವೆ ನೈಋತ್ಯ ರೈಲ್ವೆಯ 312 ಕೋಚ್ಗಳನ್ನು ಕ್ವಾರಂಟೈನ್ ಮತ್ತು ಐಸೋಲೇಷನ್ಗಾಗಿ ವಾರ್ಡ್ಗಳಾಗಿ ಪರಿವರ್ತನೆ ಮಾಡಬೇಕು ಎಂದು ಸೂಚನೆ ನೀಡಿದೆ. ಇವುಗಳಲ್ಲಿ 270 ಕೋಚ್ಗಳು ಸಿದ್ಧಗೊಂಡಿದ್ದು, ಉಳಿದವು ಮುಂದಿನ ವಾರದಲ್ಲಿ ಸಿದ್ಧವಾಗಲಿವೆ. ತುರ್ತು ಸಂದರ್ಭದಲ್ಲಿ ಇವುಗಳನ್ನು ಕ್ವಾರಂಟೈನ್ ಅಥವ ಐಸೋಲೇಷನ್ಗಾಗಿ ಬಳಸಿಕೊಳ್ಳಲಾಗುತ್ತದೆ.
ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಗೆ ಒಳಪಡುವ ವಿವಿಧ ನಗರದಲ್ಲಿ 270 ಕೋಚ್ ಸಿದ್ಧಗೊಂಡಿದೆ. ಹುಬ್ಬಳ್ಳಿ ವರ್ಕ್ ಶಾಪ್ 76, ಮೈಸೂರು ವರ್ಕ್ ಶಾಪ್ ೭೧, ಬೆಂಗಳೂರು ವಿಭಾಗದಲ್ಲಿ 61 ಮೈಸೂರು ವಿಭಾಗದಲ್ಲಿ 29, ಹುಬ್ಬಳ್ಳಿ ವಿಭಾಗದಲ್ಲಿ 33 ಸೇರಿ 270 ಕೋಚ್ಗಳು ಸಿದ್ಧಗೊಂಡಿವೆ.
ಸ್ಲೀಪರ್ ಕೋಚ್ಗಳನ್ನು ವಾರ್ಡ್ಗಳಾಗಿ ಪರಿವರ್ತನೆ ಮಾಡಲಾಗಿದೆ. ಎಲ್ಲಾ ಕೋಚ್ಗಳಲ್ಲಿ ಮಧ್ಯದ ಬರ್ತ್ಗಳನ್ನು ತೆಗೆಯಲಾಗಿದೆ. ಕಿಟಕಿಗಳಿಗೆ ಪಾರದರ್ಶಕವಾದ ಪ್ಲಾಸ್ಟಿಕ್ ಕರ್ಟನ್ ಅಳವಡಿಕೆ ಮಾಡಲಾಗಿದೆ. ನೀರಿನ ಬಾಟಲ್, ವೈದ್ಯಕೀಯ ಉಪಕರಣಗಳನ್ನು ಇಡಲು ವ್ಯವಸ್ಥೆ ಇದೆ. ನಿರಂತರವಾಗಿ ವಿದ್ಯುತ್ ಪೂರೈಕೆ ಆಗುತ್ತದೆ. ವೈದ್ಯಕೀಯ ಉಪಕರಣ ಕಾರ್ಯ ನಿರ್ವಹಣೆ ಮಾಡಲು ಸಾಕೆಟ್ಗಳ ವ್ಯವಸ್ಥೆ ಮಾಡಾಗಿದೆ. ರೋಗಿ ವಾರ್ಡ್ಗೆ ಬಂದ ತಕ್ಷಣ ಆಕ್ಸಿಜನ್ ಸಿಲಿಂಡರ್ಗಳನ್ನು ಆರೋಗ್ಯ ಇಲಾಖೆ ಪೂರೈಕೆ ಮಾಡಲಿದೆ.
]]>