Quantcast
Channel: indiaherald.com - RSS Feeds
Viewing all articles
Browse latest Browse all 297466

ಕೋವಿಡ್-19 ನಿಧಿಗೆ ಹಣವನ್ನು ನೀಡಲು ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ..! ಅಷ್ಟಕ್ಕೂ ಆ ತೀರ್ಮಾನ ಏನು ಗೊತಾ?

$
0
0
ಜಗತ್ತನೇ ಆವರಿಸಿರುವ ಕೊರೋನಾ ವೈರಸ್ ಸಾಕಷ್ಟು ಜನರನ್ನು ಬಲಿ ತೆಗೆದುಕೊಂಂಡು ಹಲವರನ್ನು ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿದೆ. ಅದೇ ರೀತಿ ಭಾರತದಲ್ಲೂ ಕೂಡ ಈ ಕೊರೋನಾ ಸೋಂಕಿತರ ಸಂಖ್ಯೆ ೫ ಸಾವಿರದ ಗಡಿಯನ್ನು ದಾಟಿದೆ ಹಾಗೂ ಸಾವಿನ ಸಂಖ್ಯೆ ನೂರರ ಗಡಿ ದಾಟಿದೆ.  ಪರಿಸ್ಥಿತಿ ಹೀಗಿರುವಾಗ ಈ ಕೊರೋನಾ ವೈರಸ್ ಅನ್ನು ಶಮನಗೊಳಿಸಬೇಕಾದರೆ ಲಾಕ್ ಡೌನ್  ಮಾಡದೇ ವಿಧಿಯೇ ಇಲ್ಲದಂತಾಗಿದೆ ಇದರಿಂದ ಕೊರೊನಾ ವೈರಸ್ ವಿರುದ್ಧ ಹೋರಾಡಲು ಆರ್ಥಿಕ ಸಂಕಷ್ಟ ಎದುರಾಗಿದೆ ಆದರೆ ಸಿಎಂ ಯಡಿಯೂರಪ್ಪನವರು ಈ ಆರ್ಥಿಕ ಸಂಕಷ್ಟವನ್ನು ಶಮನಗೊಳಿಸುವ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಆ ನಿರ್ಧಾರ ಏನು ಗೊತ್ತಾ?

 ಕೊರೋನಾ ವೈರಸ್ ಅನ್ನು ತಡೆಯಲು ಮಾಡಲಾಗಿರುವ ಲಾಕ್ ಡೌನ್ ನಿಂದ ಸಾಕಷ್ಟು ವ್ಯವಹಾರಗಳು ನಿಂತಿದ್ದು  ಇದರಿಂದ ಸರ್ಕಾರ‍್ಕೆ ಭಾರೀ ನಷ್ಟವಾಗಿದೆ ಇದರಿಂದ ಕೊರೋನಾ ವಿರುದ್ಧ ಹೋರಾಟಕ್ಕೆ ಹಣದ ಕೊರತೆ ಇರುವುದರಿಂದ ಕೋವಿಡ್ ನಿಧಿಗೆ ನೀಡಲು ರಾಜ್ಯದ ಸಚಿವರು, ಶಾಸಕರ ವೇತನದ ಶೇಕಡಾ 30 ರಷ್ಟನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ.



ಇಂದು ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ ಈ ಮಾಹಿತಿ ನೀಡಿದರು.



ಶಾಸಕರು ಹಾಗೂ ಸಚಿವರ ವೇತನದಲ್ಲಿ ಶೇಕಡಾ ೩೦ ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಉಳಿತಾಯವಾಗುವ ರೂ. 15 ಕೋಟಿ 36 ಲಕ್ಷಕ್ಕೂ ಹೆಚ್ಚಿನ ಹಣ ಕೋವಿಡ್-19 ನಿಧಿಗೆ ನೀಡಲು ತೀರ್ಮಾನ ಮಾಡಲಾಗಿದೆ. ಸುಗ್ರೀವಾಜ್ನೆ ಮೂಲಕ ಈ ಆದೇಶ ಜಾರಿ ಮಾಡಲಾಗುವುದು ಎಂದರು.



ರಾಜ್ಯದಲ್ಲಿ ಲಾಕ್ ಡೌನ್ 15 ದಿನ ವಿಸ್ತರಿಸಲು ಸಂಪುಟದ ಎಲ್ಲ ಸದಸ್ಯರು ಒತ್ತಾಯ ಮಾಡಿದ್ದಾರೆ. ಪ್ರಧಾನಿಯವರ ಜತೆ ನಾಳೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಬಿಎಸ್ ವೈ ಹೇಳಿದರು



ಕುಡಿಯುವ ನೀರು ಪೂರೈಕೆಗಾಗಿ 49 ಬರಪೀಡಿತ ತಾಲೂಕುಗಳಿಗೆ ತಲಾ 1 ಕೋಟಿ ರೂ.ಹಾಗೂ ಗ್ರಾಮೀಣ ಪಟ್ಟಣ ಪಂಚಾಯಿತಿಗಳಿಗೆ 50 ಲಕ್ಷ ರೂ ಬಿಡುಗಡೆ ಮಾಡಲಾಗುವುದು. ಜಿಎಸ್ ಟಿ ಪಾವತಿ ಅವಧಿಯನ್ನು ಜೂ.30 ರವರೆಗೆ ವಿಸ್ತರಿಸಲಾಗಿದೆ. ಸಂಕಷ್ಟದಲ್ಲಿರುವ ಹೂವು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ಸಂಬಂಧ ಸಮೀಕ್ಷೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಂಮತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.



ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯದಿರುವವರಿಗೂ ಪಡಿತರ ನೀಡಲು ನಿರ್ಧಾರ ಮಾಡಲಾಗಿದೆ. ನಾಳೆಯೊಳಗೆ ಎಲ್ಲರಿಗೂ ಪಡಿತರ ವಿತರಿಸಲು ಸೂಚನೆ ನೀಡಲಾಗಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಬಿಎಸ್ ವೈ ಹೇಳಿದರು.




]]>

Viewing all articles
Browse latest Browse all 297466

Trending Articles



<script src="https://jsc.adskeeper.com/r/s/rssing.com.1596347.js" async> </script>